ಖಾರ್ ರೋಡ್ ರೈಲ್ವೆ ನಿಲ್ದಾಣವು ಮುಂಬಯಿ ಉಪನಗರ ದ ಪಶ್ಚಿಮ ರೈಲ್ವೆಯ ಮಾರ್ಗದಲ್ಲಿರುವ, 'ಬಾಂದ್ರ,' ದ ಉತ್ತರದಲ್ಲಿದೆ. 'ಸಾಂತಾಕ್ರುಜ್,' ದಕ್ಷಿಣದಿಕ್ಕಿಗೆ ಬರುತ್ತದೆ. ಇಲ್ಲಿಂದ ಲೋಕಲ್ ಟ್ರೇನ್‍ಗಳು, ಕೊನೆಗೆ 'ಚರ್ಚ್‍ಗೇಟ್ ರೈಲ್ವೆ ಸ್ಟೇಷನ್,' ಮುಟ್ಟುತ್ತವೆ. == ಪ್ರಮುಖ ಸಂಸ್ಥೆಗಳು == 'ಖಾರ್,'(ಪ)ನಿಂದ, ಹತ್ತಿರದಲ್ಲೇ, ೧೩ ನೆಯ ರಸ್ತೆಯಲ್ಲಿ, 'ರಾಮ‍ಕ್ರಿಷ್ಣ ಮಿಶನ್,' ಶಾಖೆ ಇದೆ. ಬೇರೆ, ಸಂಸ್ಥೆಗಳು ಹೀಗಿವೆ : ಎಲ್.ಐ.ಸಿ. ಆಫೀಸ್, ನಾನಾವತಿ ಆಸ್ಪತ್ರೆ, ಜುಹು ಗ್ಲೈಡಿಂಗ್ ಕ್ಲಬ್, ಮಿಥಿ ಭಾಯ್ ಕಾಲೇಜ್, ಜುಹು ಬೀಚ್, ನಿಲ್ದಾಣದ ಹೆಸರನ್ನು ಅರಬ್ಬೀ ಸಮುದ್ರದ ಹತ್ತಿರ ಇರುವ ಕೋಲಿ ಗ್ರಾಮ ಖಾರ್-ದಂಡ ಇಂದ ಹೆಸರನ್ನು ಪಡೆದುಕೊಂಡಿದೆ. ದಂಡ ಮೀನುಗಾರರಿಗೆ ಒಂದು ನೆಲೆಯಾಗಿದೆ. ಈಗ ಒಂದು ಸಂಪರ್ಕ ಕೊಂಡಿ ಖಾರ್ ದಂಡ ದಿಂದ ಬಾಂದ್ರಾ ಸಂಪರ್ಕಿಸುತ್ತದೆ - ವೆರ್ಸೋವಾ ಸಮುದ್ರ ಸಂಪರ್ಕ ಕೊಂಡಿ. ಖಾರ್ ರೋಡ್ ನಲ್ಲಿ : ೧೧ ಜುಲೈ ೨೦೦೬ ರಂದು ಖಾರ್ ರೋಡ್ ಮುಂಬಯಿ ರೈಲು ಬಾಂಬ್ ದಾಳಿಯಿಂದ ಘೋರ ಪರಿಣಾಮ ಹೊಂದಿತ್ತು. == ಉಲ್ಲೇಖಗಳು ==